Posted on March 10, 2009 by uniquesupri
ಪುಸ್ತಕಗಳು ಎಂದರೆ ಮೊದಲಿನಿಂದಲೂ ಅದೊಂಥರ ಮಮಕಾರ. ಹೈಸ್ಕೂಲಿನಲ್ಲಿದ್ದ ದಿನಗಳಲ್ಲಿ ಮನೆಯವರೆಲ್ಲ ಸಿನೆಮಾ ನೋಡಲು ಹೊರಟರೆ ನಾನು ಟಿಕೆಟ್ ದುಡ್ಡು ಉಳಿಸಿ ಪುಸ್ತಕ ಕೊಂಡುಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಿದ್ದೆ. ಪುಸ್ತಕ ಕೊಂಡುಕೊಳ್ಳುವುದಕ್ಕೂ, ಸಂಗ್ರಹಿಸುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ವ್ಯತ್ಯಾಸವಿದೆ ಎಂಬುದು ಬಹುಬೇಗ ಅರಿವಾಯಿತು. ಅಷ್ಟರಲ್ಲಿ ನನ್ನ ವೈಯಕ್ತಿಕ ಸಂಗ್ರಹದಲ್ಲಿ ಅನೇಕ ಪುಸ್ತಗಳು ಜಮೆಯಾಗಿದ್ದವು.
ಈಗಲೂ ಪುಸ್ತಗಳ ‘ಶೋಕಿ’ ಕಡಿಮೆಯಾಗಿಲ್ಲ. ಲ್ಯಾಪ್ ಟಾಪಿನಲ್ಲಿ ಹೆಸರೂ ನೋಡಿಲ್ಲದ ನೂರಾರು ಪುಸ್ತಕಗಳು ಜಮೆಗೊಂಡಿವೆ.ತೆಳ್ಳಗಾದಾಗ ಬೇಕಾಗಬಹುದು ಎಂದು ಜೋಪಾನ ಮಾಡಿಡುವ ಪ್ಯಾಂಟಿನ ಹಾಗೆ ಎಂದೋ ಬೇಕಾಗಬಹುದೆಂದು [...]
Filed under: ದಿನಚರಿಯ ಪುಟಗಳಿಂದ | Tagged: ಕೇಂಡ್ರ ವೃತ್ತಾಂತ, ಗೃಹ ಭಂಗ, ಪುಸ್ತಕ, ಭೈರಪ್ಪ, ಲಂಕೇಶ್, ವಿಜ್ಞಾನ, ಹಾಸ್ಯ | Leave a Comment »
Posted on March 4, 2009 by uniquesupri
ಡೇವಿಡ್ ಐಕ್ ಎಂಬ ವಿಚಾರವಾದಿಯ ಡಾಕ್ಯುಮೆಂಟರಿ ಸಿನೆಮಾ ಹಾಗೂ ಕೆಲವು ಲೆಕ್ಚರ್‌ಗಳನ್ನು ನೋಡುತ್ತಿರುವೆ(ಇದು ಆತನ ಅಂತರ್ಜಾಲ ತಾಣ) . ಶಕ್ತಿಶಾಲಿಯಾದ ಕೆಲವೇ ಕೆಲವು ಮಂದಿ ಇಡೀ ಮಾನವ ಕುಲವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ದುಷ್ಟ ಹುನ್ನಾರದ ಬಗ್ಗೆ ಆತ ಕಳೆದ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಲ್ಲಿ ಮಾತನಾಡುತ್ತಿದ್ದಾನೆ. ಸರಕಾರಗಳು, ಬ್ಯಾಂಕುಗಳು, ದೊಡ್ಡ ದೊಡ್ಡ ಸಂಸ್ಥೆಗಳು, ಸಮೂಹ ಮಾಧ್ಯಮಗಳು ಹೇಗೆ ಜನ ಸಮೂಹದ ಆಲೋಚನೆಯ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತಿವೆ, ಪ್ರಜ್ಞಾಪೂರ್ವಕವಾಗಿಯೋ ಇಲ್ಲವೇ ಅಪ್ರಜ್ಞಾಪೂರ್ವಕವಾಗಿಯೋ ಹೇಗೆ ನಾವೆಲ್ಲರೂ ಆ ಬಹುದೊಡ್ಡ ಕಾನ್ಸ್ಪಿರೆಸಿಯ ಪಾಲುದಾರರಾಗಿದ್ದೇವೆ [...]
Filed under: Uncategorized | Tagged: ಡೇವಿಡ್ ಐಕ್, conspiracy, David Icke | Leave a Comment »