ಅನಂತದ ಉಪಾಸನೆಯಲ್ಲಿ!

ಕಳೆದೊಂದು ವಾರದಿಂದ ಇನ್ಫಿನಿಟಿ ಎಂದು ಕರೆಯಲ್ಪಡುವ ‘ಅನಂತ’ದ ನಾನಾ ಮಜಲುಗಳನ್ನು ಕೌತುಕ ಹಾಗೂ ಬೆರಗಿನಿಂದ ಅರಿಯುತ್ತಿದ್ದೇನೆ. ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಅಪಾರ ಅಧ್ಯಯನ ಮಾಡಿರುವ ಕೇಂಬ್ರಿಜ್ ವಿಶ್ವ ವಿದ್ಯಾಲಯದ ಉಪನ್ಯಾಸಕ ಜಾನ್.ಡಿ.ಬರೋ ಬರೆದಿರುವ ‘ದಿ ಇನ್ಫೈನೈಟ್ ಬುಕ್’ ಕಣ್ಣೆದುರಿನ ದಿನನಿತ್ಯದ ಜಗತ್ತನ್ನು ಮರೆಸಿ ಕ್ಷಣಕಾಲ ಅಗ್ರಾಹ್ಯವಾದ, ಅಪರಿಮಿತವಾದ ಅನಂತದ ಝಲಕ್ ತೋರಿಸುತ್ತದೆ. ನಮ್ಮ ಸೀಮಿತ ಬುದ್ಧಿ ಗ್ರಹಿಸಲು ಸಾಧ್ಯವೇ ಇಲ್ಲದ ಅನಂತದ ವಿಷಯವನ್ನು ಆದಷ್ಟು ಕುತೂಹಲಕರವಾಗಿ, ಗಣಿತ, ಭೌತಶಾಸ್ತ್ರದಲ್ಲಿ ಸಾಮಾನ್ಯ ತಿಳುವಳಿಕೆಯಿರುವ ಪ್ರತಿಯೊಬ್ಬನೂ ಸವಿಯಬಹುದಾದ ಹದದಲ್ಲಿ ಬರೋ [...]

ಜಾಹಿರ್‌ನ ಅನ್ವೇಷಣೆಯಲ್ಲಿ…

ಕಾಲೇಜು ಇದ್ದಾಗಲೇ ಚೆನ್ನ ಎನ್ನಿಸುತ್ತದೆ. ಎಲೆಕ್ಷನ್ ಕೌಂಟಿಂಗಿಗಾಗಿ ನಮ್ಮ ಕಾಲೇಜು ತೆಗೆದುಕೊಂಡಿರುವ ಕಾರಣಕ್ಕೆ ಒಂದು ತಿಂಗಳು ರಜೆ ಸಿಕ್ಕಿರುವಾಗ, ಪ್ರತಿದಿನದ ಅಂತ್ಯದಲ್ಲಿ ಮೂಡುವ ಭಾವನೆಯಿದು. ದಿನವಿಡೀ ಬಿಡುವಿದ್ದರೂ ಇಷ್ಟ ಪಡುವ ಕೆಲಸವನ್ನು ಮಾಡಲು ಸಾಧ್ಯವೇ ಆಗುವುದಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನಗಳಲ್ಲಿ ನನಗೆ ಒಂದೇ ಒಂದು ಪುಸ್ತಕವನ್ನೂ ಓದಿ ಮುಗಿಸಲಾಗಲಿಲ್ಲ. ಕಾಲೇಜು ಇದ್ದಾಗಲೇ ಎಷ್ಟೋ ವಾಸಿ. ಪ್ರತಿದಿನ ಒಂದು ತಾಸಿನಂತೆ ಸೆಂಟ್ರಲ್ ಲೈಬ್ರರಿಯಲ್ಲಿ ಕೂತು ಎ.ಎನ್.ಮೂರ್ತಿರಾಯರ ಆತ್ಮಕತೆ ‘ಸಂಜೆಗಣ್ಣಿನ ಹಿನ್ನೋಟ’, ಅಗ್ನಿ ಶ್ರೀಧರ್‌ರ ‘ದಾದಾಗಿರಿಯ ದಿನಗಳು’ [...]