ಕೃಷ್ಣ ನನಗ್ಯಾಕೆ ಇಷ್ಟ

 
ಅಳಿಕೆಯ ಕಾಲೇಜಿನಲ್ಲಿ ಪಿಯು ಓದುವ ದಿನಗಳಲ್ಲಿ ನಡೆದ ಘಟನೆಯಿದು. ಅಲ್ಲಿ ಮುಂಜಾನೆ ಐದಕ್ಕೆ ದೊಡ್ಡ ಧ್ವನಿಯ ಮೈಕಿನಿಂದ ಹೊರಡುವ ಸುಪ್ರಭಾತದ ಧ್ವನಿಗೆ ಎಲ್ಲರೂ ಎಚ್ಚರವಾಗುತ್ತಿದ್ದೆವು. ಇರುವ ಹದಿನೈದು ನಿಮಿಷ ಸಮಯದಲ್ಲಿ ಹಲ್ಲು ತಿಕ್ಕಿ, ಮುಖ ತೊಳೆದು ನಿದ್ದೆಯ ಜೋಂಪನ್ನು ಹೋಗಲಾಡಿಸಿಕೊಂಡು ನೀಲಿ ನಿಕ್ಕರು, ಪೂರ್ಣ ತೋಳಿನ ಬನಿಯನ್ನು ತೊಟ್ಟುಕೊಂಡು ಹಾಸಿ ಕುಳಿತುಕೊಳ್ಳಲು ದಪ್ಪನೆಯದೊಂದು ಪುಟ್ಟ ಜಮಖಾನ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ಸಾಲಿನಲ್ಲಿ ಹೋಗುತ್ತಿದ್ದೆವು. ತೂಕಡಿಸುತ್ತಲೇ ಇಪ್ಪತ್ತೊಂದು ಓಂಕಾರ ಹೇಳಿ, ಶವಾಸನ ಬರುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿ [...]