ಒಳ್ಳೆಯ ವ್ಯಕ್ತಿಯ ಕೈಲಿ ಕೆಟ್ಟದ್ದು ಮಾಡಿಸುವುದಕ್ಕೆ ಶ್ರದ್ಧೆ ಬೇಕು!

ರುಜುವಾತು ಪಡಿಸಲು ಸಾಕಷ್ಟು ಸಾಕ್ಷಿಗಳು ಇಲ್ಲದ ಸಂದರ್ಭದಲ್ಲಿಯೂ ಒಂದು ಸಂಗತಿಯನ್ನು ಗಾಢವಾಗಿ ನಂಬುವುದಕ್ಕೆ ಶ್ರದ್ಧೆ ಎನ್ನುವರು.
ಕೃಷ್ಣ ಎನ್ನುವ ಹತ್ತು ವರ್ಷದೊಳಗಿನ ಬಾಲಕ ತನ್ನ ಕಿರು ಬೆರಳಿನಲ್ಲಿ ಗೋವರ್ಧನ ಎನ್ನುವ ಹೆಸರಿನ ಬೆಟ್ಟವನ್ನು ಎತ್ತಿದ. ಅದರಡಿಯಲ್ಲಿ ಇಡೀ ಯಾದವರ ಊರು ಆಶ್ರಯವನ್ನು ಪಡೆದಿತ್ತು. ಈ ಪುರಾಣದ ಕತೆಯನ್ನು ಮನುಷ್ಯನ ಅದ್ಭುತ ಕಲ್ಪನೆಯ ಸೃಷ್ಟಿಯಾಗಿ, ಒಂದು ಪ್ರತಿಮೆಯಾಗಿ, ಸಂಕೇತವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದನ್ನು ಅಕ್ಷರಶಃ ಸತ್ಯವೆಂದು ಯಾವ ಸಾಕ್ಷಿಯೂ ಇಲ್ಲದೆ ನಂಬುವುದು ಶ್ರದ್ಧೆ ಎನ್ನಿಸಿಕೊಳ್ಳುತ್ತದೆ. [...]