ಇನ್ನೊಂದಿಷ್ಟು ಪುಸ್ತಕಗಳು ನನ್ನ ಸಂಗ್ರಹಕ್ಕೆ

ಪುಸ್ತಕಗಳು ಎಂದರೆ ಮೊದಲಿನಿಂದಲೂ ಅದೊಂಥರ ಮಮಕಾರ. ಹೈಸ್ಕೂಲಿನಲ್ಲಿದ್ದ ದಿನಗಳಲ್ಲಿ ಮನೆಯವರೆಲ್ಲ ಸಿನೆಮಾ ನೋಡಲು ಹೊರಟರೆ ನಾನು ಟಿಕೆಟ್ ದುಡ್ಡು ಉಳಿಸಿ ಪುಸ್ತಕ ಕೊಂಡುಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಿದ್ದೆ. ಪುಸ್ತಕ ಕೊಂಡುಕೊಳ್ಳುವುದಕ್ಕೂ, ಸಂಗ್ರಹಿಸುವುದಕ್ಕೂ ಪುಸ್ತಕಗಳನ್ನು ಓದುವುದಕ್ಕೂ ವ್ಯತ್ಯಾಸವಿದೆ ಎಂಬುದು ಬಹುಬೇಗ ಅರಿವಾಯಿತು. ಅಷ್ಟರಲ್ಲಿ ನನ್ನ ವೈಯಕ್ತಿಕ ಸಂಗ್ರಹದಲ್ಲಿ ಅನೇಕ ಪುಸ್ತಗಳು ಜಮೆಯಾಗಿದ್ದವು.
ಈಗಲೂ ಪುಸ್ತಗಳ ‘ಶೋಕಿ’ ಕಡಿಮೆಯಾಗಿಲ್ಲ. ಲ್ಯಾಪ್ ಟಾಪಿನಲ್ಲಿ ಹೆಸರೂ ನೋಡಿಲ್ಲದ ನೂರಾರು ಪುಸ್ತಕಗಳು ಜಮೆಗೊಂಡಿವೆ.ತೆಳ್ಳಗಾದಾಗ ಬೇಕಾಗಬಹುದು ಎಂದು ಜೋಪಾನ ಮಾಡಿಡುವ ಪ್ಯಾಂಟಿನ ಹಾಗೆ ಎಂದೋ ಬೇಕಾಗಬಹುದೆಂದು [...]

ಸ್ಪೋರ್ಟ್ಸ್ ಡೇ ನೆನಪು ಹಾಗೂ ಶಾರುಖ್ ಸಿನೆಮಾ

ಬ್ಲಾಗ್ ಎಂಬ ವಿಲಕ್ಷಣ ಹೆಸರಿನ್ನು ಪರಿಚಯ ಮಾಡಿಕೊಳ್ಳುತ್ತಾ ಮೆಲ್ಲ ಮೆಲ್ಲಗೆ ಮ್ಯಾನುಯಲ್ ಓದಿ ವಾಷಿಂಗ್ ಮಶೀನು ಶುರು ಮಾಡುವ ಹಾಗೆ ಹಂತ ಹಂತವಾಗಿ ಬ್ಲಾಗಿನ ಅಂಗಳವನ್ನು ಪರಿಚಯಿಸಿಕೊಂಡು ನನ್ನದೇ ಒಂದು ಬ್ಲಾಗನ್ನು ತೆರೆದುಕೊಂಡು ಹೊಸ ಆಟಿಕೆ ಕಂಡ ಮಗುವಿನಂತೆ ಸಂಭ್ರಮಿಸುತ್ತಾ ಹತ್ತಾರು ಆಟಿಕೆಗಳನ್ನು ಸುತ್ತಲೂ ಹರಡಿಕೊಂಡು ಕಡೆಗೆ ಎಲ್ಲದರಲ್ಲೂ ಆಸಕ್ತಿ ಬತ್ತಿ ಹೋಗಿ ಎಲ್ಲವನ್ನೂ ಒದ್ದು ಹೊರಟು ಹೋಗಿದ್ದೆ. ಆದರೆ ಅದ್ಯಾವುದೋ ಮೋಹ ನನ್ನನ್ನು ಮತ್ತೆ ಬ್ಲಾಗಿಂಗಿಗೆ ಎಳೆದು ತಂದಿತು. ಈ ಸರಳವಾದ ಅನೂಹ್ಯವಾದ ಮೋಹವನ್ನು ಪಾಶ್ಚಾತ್ಯ ಸಂಶೋಧಕರು, ಮನೋವಿಜ್ಞಾನಿಗಳು ದೊಡ್ಡ ದೊಡ್ಡ ಹೆಸರುಗಳನ್ನಿಟ್ಟು ಕರೆಯುತ್ತಾರೆ. ಪುಟಗಟ್ಟಲೆ ವ್ಯಾಖ್ಯಾನಗಳನ್ನು ಕೊಡುತ್ತಾರೆ! ನನ್ನ ಪಾಲಿಗಿದು ಅಪ್ಪಟ ಮಾಯಾವಿ ಮೋಹವಷ್ಟೇ.

ಮೇಕಪ್ ಕಳಚಿದ ಹೀರೊಗಳು!

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. [...]