ಕೃಷ್ಣ ನನಗ್ಯಾಕೆ ಇಷ್ಟ

 
ಅಳಿಕೆಯ ಕಾಲೇಜಿನಲ್ಲಿ ಪಿಯು ಓದುವ ದಿನಗಳಲ್ಲಿ ನಡೆದ ಘಟನೆಯಿದು. ಅಲ್ಲಿ ಮುಂಜಾನೆ ಐದಕ್ಕೆ ದೊಡ್ಡ ಧ್ವನಿಯ ಮೈಕಿನಿಂದ ಹೊರಡುವ ಸುಪ್ರಭಾತದ ಧ್ವನಿಗೆ ಎಲ್ಲರೂ ಎಚ್ಚರವಾಗುತ್ತಿದ್ದೆವು. ಇರುವ ಹದಿನೈದು ನಿಮಿಷ ಸಮಯದಲ್ಲಿ ಹಲ್ಲು ತಿಕ್ಕಿ, ಮುಖ ತೊಳೆದು ನಿದ್ದೆಯ ಜೋಂಪನ್ನು ಹೋಗಲಾಡಿಸಿಕೊಂಡು ನೀಲಿ ನಿಕ್ಕರು, ಪೂರ್ಣ ತೋಳಿನ ಬನಿಯನ್ನು ತೊಟ್ಟುಕೊಂಡು ಹಾಸಿ ಕುಳಿತುಕೊಳ್ಳಲು ದಪ್ಪನೆಯದೊಂದು ಪುಟ್ಟ ಜಮಖಾನ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ಸಾಲಿನಲ್ಲಿ ಹೋಗುತ್ತಿದ್ದೆವು. ತೂಕಡಿಸುತ್ತಲೇ ಇಪ್ಪತ್ತೊಂದು ಓಂಕಾರ ಹೇಳಿ, ಶವಾಸನ ಬರುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿ [...]

ಜಾಹಿರ್‌ನ ಅನ್ವೇಷಣೆಯಲ್ಲಿ…

ಕಾಲೇಜು ಇದ್ದಾಗಲೇ ಚೆನ್ನ ಎನ್ನಿಸುತ್ತದೆ. ಎಲೆಕ್ಷನ್ ಕೌಂಟಿಂಗಿಗಾಗಿ ನಮ್ಮ ಕಾಲೇಜು ತೆಗೆದುಕೊಂಡಿರುವ ಕಾರಣಕ್ಕೆ ಒಂದು ತಿಂಗಳು ರಜೆ ಸಿಕ್ಕಿರುವಾಗ, ಪ್ರತಿದಿನದ ಅಂತ್ಯದಲ್ಲಿ ಮೂಡುವ ಭಾವನೆಯಿದು. ದಿನವಿಡೀ ಬಿಡುವಿದ್ದರೂ ಇಷ್ಟ ಪಡುವ ಕೆಲಸವನ್ನು ಮಾಡಲು ಸಾಧ್ಯವೇ ಆಗುವುದಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನಗಳಲ್ಲಿ ನನಗೆ ಒಂದೇ ಒಂದು ಪುಸ್ತಕವನ್ನೂ ಓದಿ ಮುಗಿಸಲಾಗಲಿಲ್ಲ. ಕಾಲೇಜು ಇದ್ದಾಗಲೇ ಎಷ್ಟೋ ವಾಸಿ. ಪ್ರತಿದಿನ ಒಂದು ತಾಸಿನಂತೆ ಸೆಂಟ್ರಲ್ ಲೈಬ್ರರಿಯಲ್ಲಿ ಕೂತು ಎ.ಎನ್.ಮೂರ್ತಿರಾಯರ ಆತ್ಮಕತೆ ‘ಸಂಜೆಗಣ್ಣಿನ ಹಿನ್ನೋಟ’, ಅಗ್ನಿ ಶ್ರೀಧರ್‌ರ ‘ದಾದಾಗಿರಿಯ ದಿನಗಳು’ [...]

ಡೇವಿಡ್ ಐಕ್ ಎಂಬ ತಿಕ್ಕಲು ಪ್ರವಾದಿ

ಡೇವಿಡ್ ಐಕ್ ಎಂಬ ವಿಚಾರವಾದಿಯ ಡಾಕ್ಯುಮೆಂಟರಿ ಸಿನೆಮಾ ಹಾಗೂ ಕೆಲವು ಲೆಕ್ಚರ್‌ಗಳನ್ನು ನೋಡುತ್ತಿರುವೆ(ಇದು ಆತನ ಅಂತರ್ಜಾಲ ತಾಣ) . ಶಕ್ತಿಶಾಲಿಯಾದ ಕೆಲವೇ ಕೆಲವು ಮಂದಿ ಇಡೀ ಮಾನವ ಕುಲವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ದುಷ್ಟ ಹುನ್ನಾರದ ಬಗ್ಗೆ ಆತ ಕಳೆದ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಲ್ಲಿ ಮಾತನಾಡುತ್ತಿದ್ದಾನೆ. ಸರಕಾರಗಳು, ಬ್ಯಾಂಕುಗಳು, ದೊಡ್ಡ ದೊಡ್ಡ ಸಂಸ್ಥೆಗಳು, ಸಮೂಹ ಮಾಧ್ಯಮಗಳು ಹೇಗೆ ಜನ ಸಮೂಹದ ಆಲೋಚನೆಯ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತಿವೆ, ಪ್ರಜ್ಞಾಪೂರ್ವಕವಾಗಿಯೋ ಇಲ್ಲವೇ ಅಪ್ರಜ್ಞಾಪೂರ್ವಕವಾಗಿಯೋ ಹೇಗೆ ನಾವೆಲ್ಲರೂ ಆ ಬಹುದೊಡ್ಡ ಕಾನ್ಸ್ಪಿರೆಸಿಯ ಪಾಲುದಾರರಾಗಿದ್ದೇವೆ [...]

ಒಂದು ಬೆಳಗು

 
ಎಚ್ಚರವಾಯ್ತು. ರೆಕ್ಕೆಗಳಲ್ಲಿ ಹಿಂದಿನ ರಾತ್ರಿಯ ದಣಿವಿನ ಗೋರಿ. ನಿನ್ನೆಯ ಸ್ಮರಣೆಯ ನಾಜೂಕಾದ ಎಳೆ. ಗುಡ್ಡದ ತುದಿಯಿಂದ ಉರುಳಲು ಸಿದ್ಧವಾದ ಬಂಡೆಯಂಥ ಶಕ್ತಿ. ರೆಕ್ಕೆ ಫಡಫಡಿಸಿ ಕಣ್ಣು ನಿಚ್ಚಳವಾದರೂ ಬೆಳಕು ಹರಿದಿಲ್ಲ. ಅಲರಾಂ ಬಡಿದಿಲ್ಲ ಎನ್ನುವುದು ಸ್ಪಷ್ಟ. ರೂಮಿನ ಏಕೈಕ ಬೆಳಕಿನ ಕಿಂಡಿಯಾದ ಕಿಟಕಿಯ ಗಾಜಿನ ಮೇಲಿನ ಇಬ್ಬನಿ ಬೀದಿ ಟ್ಯೂಬ್ ಲೈಟಿನ ಬೆಳಕನ್ನು ಮಬ್ಬು ಮಬ್ಬಾಗಿಸಿ ಒಳಕ್ಕೆ ತಳ್ಳುತ್ತಿದೆ. ನಿದ್ರಾ ದೇವಿಯ ಅಮಲನ್ನು ಹೆಚ್ಚಾಗಿಸುವ ಹುನ್ನಾರದಂತೆ!
ಪಕ್ಕದಲ್ಲಿನ ರೂಂ ಮೇಟ್‌ಗೆ ಯಾವುದೋ ಸಿಹಿಗನಸು, ಅರಿವಿಲ್ಲದೆ ತುಟಿಯರಳಿದೆ. ಆತನ ಸಿಹಿಗನಸಿನ [...]

ಹಕ್ಕಿಗೆ ಹಾಡು ನೆನಪಾಗಿದೆ!

ಹಕ್ಕಿಯ ಕೊರಳಿಗೆ ಮತ್ತೆ ಜೀವಬಂದಿದೆ. ಸುತ್ತಲಿನ ನಿಸರ್ಗಕ್ಕೆ ಹಸಿರು ಬಂದಿದೆ. ಹಕ್ಕಿ ಕೊರಳು ಬಿಚ್ಚಿ ಹಾಡುತ್ತಲಿದೆ…
ಹಕ್ಕಿಯು ಗಂಟಲು ತೆರೆದು ದನಿ ಹೊರಡಿಸಿದಾಗ ಹಾಡು ಮೈತಳೆಯುತ್ತದಾ ಇಲ್ಲವೇ ಹಾಡು ತಾನಾಗಿ ಕೃಪೆ ತೋರಿ ಹಕ್ಕಿಯ ಗಂಟಲು ತುಂಬಿ ಹೊರಹೊಮ್ಮುತ್ತದಾ ಎಂದು ನನ್ನ ಕೇಳಿಕೊಳ್ಳುತ್ತೇನೆ.
ನಿಶ್ಚಲವಾದ ಮರದ ಕೊಂಬೆಯ ಮೇಲೆ ನೆಮ್ಮದಿಯಿಂದ ಕೂತು ಧ್ವನಿ ಪೆಟ್ಟಿಗೆ ಬಿಚ್ಚಲು ಶುರುಮಾಡಿದ ಹಕ್ಕಿಗೆ ಬಿಟ್ಟು ಬಂದ ಗೂಡು, ಅದರೊಳಗಿನ ಹಸಿವಿನ ಆಕ್ರಂದನ ಕೇಳಿದರೆ ಹಾಡಿನ ಶೃತಿಯ ನೆನಪು ಉಳಿದೀತೆ ಎಂದು ವಿಸ್ಮಯಗೊಳ್ಳುತ್ತೇನೆ.
ಹಕ್ಕಿಯ ಹಾಡಿನ ಇಂಪಿನ [...]