ಮಹಿಳೆಯರ ದಿನಕ್ಕೆ ಕನ್ನಡಪ್ರಭದ ಕೊಡುಗೆ

ವಿಜಯ ಕರ್ನಾಟಕದಿಂದ ಕನ್ನಡಪ್ರಭಕ್ಕೆ ಗುಳೆ ಹೊರಟ ಮೂರು ಪ್ಲಸ್ ಒಂದು ಮಂದಿ ಪತ್ರಕರ್ತರ ತಂಡ “ನೋಡ್ತಾ ಇರಿ, ಏನೇನ್ ಮಾಡ್ತೀವಿ!” ಎಂದು ಇಂದಿನ ಸಂಚಿಕೆಯಲ್ಲಿ  ಹೂಂಕರಿಸಿದ್ದಾರೆ. ಓದುಗರಿಗೆ ದಿನನಿತ್ಯದ ಸುದ್ದಿಯನ್ನು ತಿಳಿಯುವುದಕ್ಕಿಂತ ಇವರು ಏನು ಮಾಡುತ್ತಾರೆ ಎನ್ನುವುದೇ ಮುಖ್ಯ ಎಂದು ಭಾವಿಸಿದಂತಿದೆ.

ಅದೆಲ್ಲ ಪಕ್ಕಕ್ಕಿರಲಿ, ಇಂದು ವಿಶ್ವ ಮಹಿಳಾ ದಿನಾಚರಣೆ. ಮಹಿಳೆಯನ್ನು ಇಡೀ ಜಗತ್ತು ಗೌರವಿಸುವ, ಮಹಿಳೆಯ ಸಾಧನೆಗಳನ್ನು ಗುರುತಿಸುವ, ಮಹಿಳೆಯ ಸ್ವಾಭಿಮಾನ, ಸ್ಥೈರ್ಯಗಳನ್ನು ನೆನೆಯುವ ಸಾಂಕೇತಿಕ ದಿನ. ಈ ದಿನಕ್ಕೆ ಕನ್ನಡ ಪ್ರಭದ ಕೊಡುಗೆ : ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಅಸಹನೆ, ವ್ಯಗ್ರತೆ ಹುಟ್ಟು ಹಾಕುವ ‘ಕವಲು’ ಕಾದಂಬರಿ ಬರೆದ ಎಸ್.ಎಲ್.ಭೈರಪ್ಪನವರ ಅಂಕಣ!

ಪ್ರತಿವಾರ ಕನ್ನಡಪ್ರಭದಲ್ಲಿ ಅರ್ಧಪುಟದ ಭೈರಪ್ಪನವರ ಅಂಕಣ ಪ್ರಕಟವಾಗುತ್ತದೆ ಎಂದಾಗ ಗೆಳೆಯನೊಬ್ಬ ಹಾಗಿದ್ದರೆ ಎರಡು ಪುಟ ಆ ಅಂಕಣದ ಆಕರಗ್ರಂಥ, ರೆಫರೆನ್ಸು, ಲಿಂಕುಗಳಿಗೆ ಮೀಸಲಾಗಿರುತ್ತದೆಯಾ ಎಂದು ಕೇಳಿದ್ದ.

Advertisements

9 thoughts on “ಮಹಿಳೆಯರ ದಿನಕ್ಕೆ ಕನ್ನಡಪ್ರಭದ ಕೊಡುಗೆ

  • ಪೂರ್ವಗ್ರಹ ಏನಿದೆ?ವಾಸ್ತವವೇ ಅಲ್ಲವೇ?
   ಅಪಹಾಸ್ಯ ಅಂತಲ್ಲ, ವಿಪರೀತ ಹೈಪ್ ಸೃಷ್ಟಿ ಮಾಡುವುದನ್ನು ಕಂಡು ಹುಟ್ಟಿದ ರೇಜಿಗೆಯಷ್ಟೇ.
   ಭಟ್ಟರು ಉತ್ತಮ ಪತ್ರಿಕೆಯನ್ನು ರೂಪಿಸುವ ಛಾತಿಯಿರುವವರು. ಆದರೆ ಇಡೀ ಪತ್ರಿಕೆ ಕೆಲವೇ ವ್ಯಕ್ತಿಗಳ ಇಮೇಜ್ ಪೋಷಣೆಗೆ ಬಳಕೆಯಾದರೆ ಅದು ಓದುಗರಿಗೆ ಬಗೆಯುವ ದ್ರೋಹ. ಹೀಗಾಗಿ ಅವರ ಕ.ಪ್ರದ ‘ಸ್ಟಂಟ್’ಗಳನ್ನು ಅಸಡ್ಡೆಯಿಂದ ನೋಡಬೇಕಿದೆ.

   • ಅಂಕಿ ಅಂಶಗಳೇ ಮಾನದಂಡವಾಗಿರುವ ಕಾಲದಲ್ಲಿ ಹೈಪ್ ಇಲ್ಲದೆ ಏನೂ ನಡೆಯಲ್ಲ. ಕನ್ನಡ ಪ್ರಭದಲ್ಲಿ ಬದಲಾವಣೆಗಳು ಬರದಿದ್ದರೆ ಜನ ಒಪ್ಪಿಕೊಳ್ಳಲ್ಲ. ಅದಕ್ಕೆ ಹೊಸ ಬದಲಾವಣೆಗಳ ಸೂಚನೆಯನ್ನು ಜನರಿಗೆ ಈ ಮೂಲಕ ನೀಡುತ್ತಿದ್ದಾರೆ. ಇದರಲ್ಲಿ ವಿಪರೀತವೇನೂ ಕಂಡು ಬರುವುದಿಲ್ಲ. ವಿಪರೀತವೇನಿದ್ದರೂ ನಮ್ಮ ಯೋಚನೆಗಳು. ಅಷ್ಟಕ್ಕೂ ಬೈಯಲೇ ಬೇಕೆಂದರೆ times ಗ್ರೂಪ್ ಅನ್ನು ಸೇರಿಸಿ ಬೈಯಿರಿ “ಭಟ್ಟರು times ಗ್ರೂಪ್ ನಿಂದ ಬಂದವರಲ್ಲವೇ ಎಂದು”. ಹೈಪ್ ಮಾಡುವುದರಲ್ಲಿ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ.

 1. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಗಾದೆ ಕೇಳಿರಬೇಕಲ್ಲ. ಭೈರಪ್ಪ ಲೇಕನಕ್ಕು ಮಹಿಳಾ ದಿನಾಚರಣೆಗು ತಳುಕು ಹಾಕಿರುವುದು ಬಾಲಿಶ ಅನ್ನಿಸುವದಿಲ್ವಾ. ನಾನು ಯಾರನ್ನು ಸಮರ್ಥನೆಗು ಇಳಿಯುತ್ತಿಲ್ಲ. ಆದರೆ ಅದೇ ಕನ್ನಡ ಪ್ರಭ ಮುಖಪುಟ ವಿನ್ಯಾಸ ಮತ್ತು ಅದರ ಬೆನ್ನು ಪುಟದಲ್ಲಿ ಅಸಾಮಾನ್ಯ ಮಹಿಳೆಯರ ಪರಿಚಯ ಈ ದಿಟ್ಟ ಹೆಜ್ಜೆ ನಿಮ್ಮ ಗಮನ ಸೆಳೆಯದಿರುವುದು ಯಾವುದೋ “ಪೂರ್ವಾಗ್ರಹ ಪೀಡಿತ” ಯೋಚನೆ ಎಂದೆನಿಸುವದಿಲ್ಲವೆ! ಆದಾಗ್ಗ್ಯೂ ನಿಮ್ಮ ಬರವಣಿಗೆ ಮ್ಲಾನವಾಗಿದೆ. ಓದಿದ ದಣಿವು ಗಮನಕ್ಕೆ ಬರುವುದಿಲ್ಲ. ಧನ್ಯವಾದಗಳು…

 2. ಕೆಲವು ಜನರು ಒಳ್ಳೆಯದನ್ನು ನಿರಾಕರಿಸುವುದರಲ್ಲೇ ತಮ್ಮ ಅಸ್ತಿತ್ವ ಕಂಡು ಕೊಳ್ಳುತ್ತಾರೆ.. ಉದಾಹರಣೆಗೆ – ಅರುಂಧತಿ ರಾಯ್, ತೀಸ್ತಾ ಸೇತಲ್ವಾದ್. ಈಗ ನೋಡಿ, ಒಳ್ಳೆಯದನ್ನು ಮಾಡಿ ಹೆಸರು ಮಾಡುವುದು ಎಷ್ಟು ಕಷ್ಟ! ಆದರೆ ಒಳ್ಳೆಯದನ್ನು ತೆಗಳಿದರೆ ಇನ್ಸ್ಟಂಟ್ ಫೇಮಸ್. ನೀವು ಇಂತಹ ದಾರಿ ತುಳುದಿದ್ದೀರ. ಖುಷಿ. ಕಪ್ಪು ಇಲ್ಲದಿದ್ದರೆ ಬಿಳುಪಿಗೆ ಹೇಗೆ ಕಿಮ್ಮತ್ತು ಬರುತ್ತದೆ? ನಮ್ಮ ಸಮಾಜಕ್ಕೆ ನಿಮ್ಮಂಥವರೂ ಬೇಕು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s