ಬದಲಾಗದೆ ಉಳಿವಿಲ್ಲ

ದಯಮಾಡಿ ಕ್ಷಮಿಸಿ
ಇನ್ನು ಬದಲಾಗದೆ ನನಗೆ ಉಳಿವಿಲ್ಲ

ನಿಜ, ಕಂಡ ಕಂಡ ಹೂಜಿ, ಲೋಟ, ಬಾಟಲಿಗಳ
ಆಕಾರಕ್ಕೆ ಹಿಗ್ಗುವುದು, ಕುಗ್ಗುವುದು
ಮಜವೇ
ಎದುರಿನವರ ಕಣ್ಣು ಮಿನುಗಿದರೇ
ಅಲ್ಲವೇ ನನ್ನ ಬಾಳ್ವೆಗೆ ಬೆಳಕು?

ಈ ನಯ ನುಣುಪು ನಾಜೂಕು
ಈ ಸಭ್ಯತೆ, ಗಾಂಭೀರ್ಯ, ಗಾಳಿ ನಡಿಗೆ
ಸಾಕಿನ್ನು
ಹರಳು ಗಟ್ಟಬೇಕಿದೆ
ಒರಟಾದರೂ, ವಿಕಾರವಾದರೂ
ಹಲ್ಲು ಕಚ್ಚಿ ಕೈ, ಕಾಲು ಧರಿಸಬೇಕಿದೆ
ಎಡವಿ ತಡವಿದರೂ ಸೈ
ಮೈಯೊತ್ತಿ ನೆಲದ ಮೇಲೆ ತೆವಳಬೇಕಿದೆ

Advertisements

3 thoughts on “ಬದಲಾಗದೆ ಉಳಿವಿಲ್ಲ

  1. ಒಂದು ರೀತಿಯ frustration ಕಾಣುತ್ತಿದೆ ಈ ಕವನದಲ್ಲಿ, ಸುಪ್ರೀತ್. ಹೌದು ಎಲ್ಲರನ್ನು ಮೆಚ್ಚಿಸಲು ಹೋದರೆ ನಮಗೆ ನಾವೇ ಮೋಸ ಮಾಡಿದಂತೆ. one cannot please all the people all the time.

  2. ಬಹಳ ಸ್ಪಷ್ಟವಾಗಿ ಹೇಳಿದಿರಿ ಮನದ ತುಮುಲ. ಒಂದು ಥರ ಸರಿಗೆ ಮೇಲಿನ ನಡಿಗೆ ಬದುಕು. ಸ್ಪಂಜಿನಷ್ಟು ಮೆತ್ತಗೂ ಆಗದೆ, ವಜ್ರದಷ್ಟು ಕಠಿಣವೂ ಆಗದೆ (ತನಗೂ ಮೋಸ ಮಾಡದೆ, ಇತರರಿಗೂ ಬೇಡವಾಗದೆ) ಬದುಕಬೇಕೆನೋ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s