ಸ್ವಪ್ನ ಸಾದೃಶ್ಯ ಪುಸ್ತಕ ಬಿಡುಗಡೆ, ತಪ್ಪದೇ ಬನ್ನಿ

ಇಂದಿಗೆ ಎರಡೂವರೆ ವರ್ಷಗಳ ಹಿಂದೆ ಪ್ರಕಾಶ್ ರಾಜ್ (ಕನ್ನಡದ ಪ್ರಕಾಶ್ ರೈ)‌ ನಿರ್ದೇಶಿಸಿದ “ನಾನೂ… ನನ್ನ ಕನಸು” ಕನ್ನಡ ಸಿನೆಮಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸಂವಾದ ಡಾಟ್ ಕಾಮ್ ಈ ಚಿತ್ರ ಸಂವಾದವನ್ನು ಆಯೋಜಿಸಿತ್ತು. ಸಂವಾದ ಕಾರ್ಯಕ್ರಮದ ಮುನ್ನ ಚಿತ್ರದ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ನಾನು ಆ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಕೆಲವು ದಿನಗಳ ಹಿಂದಷ್ಟೇ ಥಿಯೇಟರಿನಲ್ಲಿ ಈ ಸಿನೆಮಾ ನೋಡಿದ್ದೆ.

ಸಂವಾದ ಕಾರ್ಯಕ್ರಮ ಆಯೋಜಿಸಿದ್ದ ಯವನಿಕಾ ಸಭಾಂಗಣದೊಳಕ್ಕೆ ಹೋದಾಗ ಅದಾಗಲೇ ಸಂಜೆಯಾಗಿತ್ತು. ಸಂವಾದ ಚಾಲ್ತಿಯಲ್ಲಿತ್ತು. ವೇದಿಕೆಯ ಮೇಲೆ ಒಂದು ಪಾರ್ಶ್ವದಲ್ಲಿ ಚಿತ್ರ ತಂಡ ಉಪಸ್ಥಿತವಿತ್ತು. ಮತ್ತೊಂದು ಪಾರ್ಶ್ವದಲ್ಲಿ ಸಂವಾದ ನಡೆಸುವುದಕ್ಕೆಂದು ಕರೆಸಲಾಗಿದ್ದ ಸಂಪನ್ಮೂಲ ವ್ಯಕ್ತಿಗಳ ತಂಡ ನೆರೆದಿತ್ತು. ನನಗೆ ಎಲ್ಲವೂ ಹೊಸತು. ನೆರೆದಿದ್ದ ಪ್ರೇಕ್ಷಕರಲ್ಲಿ ಕೆಲವರು ಸ್ಟಾರ್ ಗಳನ್ನು ಕಂಡು ಮುಟ್ಟಿ ಮಾತಾಡಿಸುವ ತವಕದಲ್ಲಿದ್ದರು. ಇನ್ನು ಕೆಲವರು ಕಟಕಟೆಯಲ್ಲಿ ನಿಂತ ಖೈದಿಯನ್ನು ಖಂಡ ತುಂಡವಾಗಿ ಪ್ರಶ್ನಿಸುವ ಉಮ್ಮೇದಿನಲ್ಲಿ ಇದ್ದವರಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಂವಾದ ಡಾಟ್ ಕಾಮ್ ನ ಹಿರಿಯರು ತಮಗಷ್ಟೇ ಅರ್ಥವಾಗುತ್ತಿದ್ದ ಪಾರಿಭಾಷಕ ಪದಗಳಿಗೆ ವೇದಿಕೆಯ ಮೇಲಿರುವ ಒಬ್ಬನಾದರೂ ಸ್ಪಂದಿಸಬಲ್ಲನೋ ಎನ್ನುವ ಅಸಹಾಯಕತೆಯಲ್ಲಿದ್ದರು.

ಮೈಕು ಹಿಡಿದು ನಾನು ಒಂದೆರೆಡು ಮಾತಾಡ ಬೇಕಾಗಿ ಬಂದಾಗ ದೇಶಾವರಿಯ ನಗೆಯನ್ನು ಅರಳಿಸುತ್ತಾ “ನನಗೇನು ಕ್ಯಾತೆಗಳಿಲ್ಲ ಸಿನೆಮಾದ ಬಗ್ಗೆ. ನಾನು ಮೂಲ ತಮಿಳು ಸಿನೆಮಾ ನೋಡಿಲ್ಲವಾದ್ದರಿಂದ ಹೋಲಿಕೆ ಮಾಡಿ ಪ್ರಶ್ನಿಸುವಂಥದ್ದೂ ಏನು ಇಲ್ಲ.” ಎಂದು ಮೈಕು ದಾಟಿಸಿ ಪಾರಾಗಿದ್ದೆ.

ಕ್ರಮೇಣ ಪರಿಸ್ಥಿತಿಯ ವಿನ್ಯಾಸ ಹಾಗೂ ಆಸಕ್ತಿಗಳ ಹೊಂದಾಣಿಕೆಯಿಂದ ಸಂವಾದ ಡಾಟ್ ಕಾಮ್ ನ ಹಲವು ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುವ ಹಾಗೂ ಅವುಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಒದಗಿ ಬಂದವು. ನನ್ನ ಮತ್ತು ಸಂವಾದ ಡಾಟ್ ಕಾಮ್ ನ ನಂಟು ನಾಲ್ಕಾರು ಸಿನೆಮಾ ಸಂವಾದಗಳು, ಎರಡು ಶಿಬಿರಗಳು, ಚಿತ್ರಕತೆ ಸಿದ್ಧತೆಗೆಂದು ಒಂದು ಪ್ರವಾಸ, ಹತ್ತಾರು ಅರ್ಧಕ್ಕೆ ನಿಂತ ಯೋಜನೆಗಳು, ನೂರಾರು ಒಳನೋಟಗಳುಳ್ಳ ಚರ್ಚೆಗಳು, ಕೆಲವು ಮುನಿಸುಗಳು- ಇವುಗಳೆಲ್ಲವನ್ನು ಬಳಸಿ, ದಾಟಿ ಈಗ ಒಂದು ಘಟ್ಟಕ್ಕೆ ಬಂದು ನಿಂತಿದೆ.

ಬರುವ ಶನಿವಾರ ಡಿಸೆಂಬರ್ ೧, ಸಂವಾದ ಡಾಟ್ ಕಾಂ “ಸ್ವಪ್ನ ಸಾದೃಶ್ಯ” ಎನ್ನುವ ಪುಸ್ತಕವನ್ನು ಹೊರತರಲಿದೆ. ೨೦೦೦-೨೦೧೦ವರೆಗಿನ ಹದಿಮೂರು ಕನ್ನಡ ಜನಪ್ರಿಯ ಚಿತ್ರಗಳನ್ನು ಅತ್ಯಂತ ಶ್ರದ್ಧೆಯಿಂದ, ತುಂಬು ಉತ್ಸಾಹದಿಂದ ತಡವಿ ತಿಕ್ಕಿ ಅರ್ಥ ಹೊಮ್ಮಿಸುವ ಪ್ರಯತ್ನಗಳು ಇದರಲ್ಲಿವೆ.

ಆ ದಿನಗಳು” ಮತ್ತು “ಲೈಫು ಇಷ್ಟೇನೆ” ಎಂಬ ಎರಡು ವಿಶಿಷ್ಟ ಸಿನೆಮಾಗಳ ಕುರಿತ ನನ್ನ ಬರಹಗಳೆರಡು ಈ ಸಂಕಲನದಲ್ಲಿವೆ. ನನಗೇ ಸ್ಪಷ್ಟವಿರದ ಏನನ್ನೋ ಅರಸಿಕೊಂಡು, ಅರಸುತ್ತಿದ್ದುದು ಸಿಕ್ಕಿಯೋ ಅಥವಾ ಸಿಕ್ಕಿತೆಂದು ಕಲ್ಪಿಸಿಕೊಂಡು ನಾನು ಸಿನೆಮಾ ವಿಮರ್ಶೆಯಲ್ಲಿ ತೊಡಗಿಕೊಂಡಿರುವೆ. ಈ ಬಾಲಿಶ ಪ್ರಯತ್ನಗಳಿಗೊಂದು ಶಿಷ್ಟವಾದ ಚೌಕಟ್ಟು ಈ ಪುಸ್ತಕದಿಂದ ದೊರೆಯಲಿದೆ ಎನ್ನುವುದು ನನ್ನ ನಂಬಿಕೆ.

ಶನಿವಾರ ಸಂಜೆ ೬:೩೦ ಕ್ಕೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವಿದೆ. ದಯವಿಟ್ಟು ಬನ್ನಿ.

ಸ್ಥಳ:

Advertisements

2 thoughts on “ಸ್ವಪ್ನ ಸಾದೃಶ್ಯ ಪುಸ್ತಕ ಬಿಡುಗಡೆ, ತಪ್ಪದೇ ಬನ್ನಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s