ಚಪಾತಿ ಲಟ್ಟಿಸುವಾಗಿನ ಚಿಂತನೆಗಳು

ಚಪಾತಿ ಲಟ್ಟಿಸುವ ದಿವ್ಯ ಕ್ಷಣಗಳಲ್ಲಿ ಮೆದುಳಲ್ಲಿ ಮಥಿಸುವ ಚಿಂತನೆಗಳನ್ನು ವರದಿ ಮಾಡುವ ಪ್ರಯತ್ನವಿದು. ಸುಮ್ಮನೆ ಲಘುವಾದ ಪ್ರತ್ಯೇಕ ಕೆಟಗರಿ…

ಮದುವೆಯಾದ ಗಂಡು ಹೆಣ್ಣು. ಗಂಡು ಹೆಣ್ಣಿಗೆ ಹೆದರುವ, ಹೆಣ್ಣು ಗಂಡಿಗೆ ಹೆದರುವ ವಾಸ್ತವ. ಹೆದರಿಕೆ ಅನ್ನೋದು ಪುಕ್ಕಲುತನ, ಅಸಹಾಯಕತೆಯೇ ಆಗಬೇಕಿಲ್ಲ. ಅಲ್ಲಿ ನಡೆಯುವ ಏನೊಂದಕ್ಕೆ ಹೆಸರು ಬೇಕಲ್ಲ? ಹೆದರಿಕೆ ಅನ್ನೋಣ.

ಹೆಣ್ಣು ಗಂಡಿನ ಕೋಪಕ್ಕೆ, ಬಲಪ್ರಯೋಗಕ್ಕೆ , ಏಟಿಗೆ ಹೆದರುತ್ತಾಳೆ.

ಗಂಡು ಹೆಣ್ಣಿನ ಅಳು, ಮುನಿಸು, ಬೇಸರ, ನೋವಿಗೆ ಹೆದರುತ್ತಾನೆ.